Translate

Thursday, September 18, 2014

BJP building martyrs' memorial in KarnatakaThe BJP's youth wing is building a martyrs' memorial at Gorata, 65 km from here in northern Karnataka, as a tribute to about 200 freedom fighters who were massacred by Nizam soldiers (Razakars) in the village in 1948 when it was part of the erstwhile Hyderabad state.

The BJP's Yuva Morcha (youth wing) is also constructing a statute and a building in the sleepy hamlet in memory of Sardar Vallabhai Patel, who was instrumental in liberating the Hyderabad state from Nizam's suzerainty.

A spot in Gorata is also known as the 'Jallianwala Bagh of Karnataka' after the massacre, as many women and children were also killed for demanding merger of the state's northern districts, which was part of the Nizam kingdom, with the Indian state a year after independence.

"The historical memorial is being built in recognition of the supreme sacrifice of the freedom fighters of this village and will be an inspiration for the country's youth about the martyrs who laid down their lives to free India from the British rule," BJP's national president Amit Shah said after the ground-breaking ceremony for the three structures at Gorata, about 790 km from Bangalore.

About 2.7 lakh members of the party's youth wing have pledged to contribute Rs.10 each to meet the cost of the memorial and the building at the historic spot in the village.

Recalling that about 300 other princely states merged with the Indian state soon after independence, Shah said some feudal states like Nizam's Hyderabad, which included parts of Telangana, Karnataka and Maharashtra could attain freedom only 13 months after the country was liberated from the British in August 1947 due to the courage and leadership of Sardar Patel.

"Sardar Patel ensured that India remained a single entity and not in bits and pieces the colonial rulers had conspired to leave behind," Shah said on the occasion in the presence of the party's state leaders and hundreds of the village folks.

Sep 17 is also celebrated as the 'Hyderabad-Karnataka Liberation Day' every year to mark the Indian Army's entry into the erstwhile Hyderabad state and the eventual overthrow of the Nizam ruler.

According to old-timers, Gorata was also known as the cradle of Hindustani music and for its rich cultural heritage.

Located on the border of Karnataka-Maharashtra, the village was part of the Nizam's kingdom along with Bidar, Gulbarga, Yadgir, Raichur and Koppal districts in the northern region of this state.

Leading the uprising against the Nizam, the martyrs sung "Vande Mataram" verse, which annoyed the king and ordered his troops to shoot them when they refused to disperse from the spot May 9-10, 1948.

The Razakars also looted the people and destroyed hundreds of homes in the village.

source:http://www.mangalorean.com/news.php?newstype=local&newsid=513141

ಇತಿಹಾಸ ತಿಳಿಸಲು ಸ್ಮಾರಕ


ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪುತ್ಥಳಿ ಸ್ಥಾಪನೆಗೆ ಅಮಿತ್‌ ಷಾ ಅಡಿಗಲ್ಲು
ಬಸವಕಲ್ಯಾಣ ತಾಲ್ಲೂಕು ಗೋರ್ಟಾದಲ್ಲಿ ನಡೆದ ಹುತಾತ್ಮರ ಸ್ಮಾರಕ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಗೋರ್ಟಾದಲ್ಲಿ ನಡೆದ ಸಮಾರಂಭದಲ್ಲಿ ಸೇರಿದ್ದ ಬೃಹತ್‌ ಜನಸಮೂಹ


ಬೀದರ್‌: ‘ಹೈದರಾಬಾದ್‌– ಕರ್ನಾಟಕ ಭಾಗ­ದಲ್ಲಿ ನಿಜಾಮರ ಆಡಳಿತದಿಂದ ವಿಮೋಚನೆಗೆ ನಡೆದ ಹೋರಾಟದಲ್ಲಿ ಹುತಾತ್ಮರಾದವರ ನೆನಪಿಗೆ ಬಸವಕಲ್ಯಾಣ ತಾಲ್ಲೂಕು ಗೋರ್ಟಾ ಗ್ರಾಮದಲ್ಲಿ ಸ್ಮಾರಕ ನಿರ್ಮಿಸುವುದು, ಹುತಾತ್ಮರಿಗೆ ಸಲ್ಲಿಸುವ ಶ್ರದ್ಧಾಂಜಲಿಯಷ್ಟೇ ಅಲ್ಲ; ಯುವ ಮತ್ತು ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸಿಕೊಡುವ ಪ್ರಯತ್ನ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪ್ರತಿಪಾದಿಸಿದರು.

ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನವಾದ ಬುಧವಾರ ಜಿಲ್ಲೆಯ ಬಸವ­ಕಲ್ಯಾಣ ತಾಲ್ಲೂಕಿನ ಗೋರ್ಟಾ ಗ್ರಾಮದಲ್ಲಿ ಹುತಾತ್ಮರ ಸ್ಮಾರಕ ನಿರ್ಮಾ­ಣ ಮತ್ತು ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಹುತಾತ್ಮರ ಸ್ಮಾರಕ ನಿರ್ಮಾಣವನ್ನು ರಾಜ­ಕೀಯ­ಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಪರೋಕ್ಷವಾಗಿ ತಳ್ಳಿಹಾಕಿದರು.

ಗೋರ್ಟಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡವನ್ನು ದಕ್ಷಿಣದ ಜಲಿಯನ­ವಾಲಾಬಾಗ್‌ ಘಟನೆ ಎಂದೂ ಬಿಂಬಿಸಲಾಗುತ್ತದೆ. ಇಂಥ ಸ್ಥಳದಲ್ಲಿ ಹುತಾತ್ಮರ ಸ್ಮಾರಕವನ್ನು ಕಾರ್ಯಕರ್ತ­ರಿಂದಲೇ ದೇಣಿಗೆ ಸಂಗ್ರಹಿಸಿ ನಿರ್ಮಿಸಲು ಯುವ ಮೋರ್ಚಾ ಮುಂದಾಗಿರುವುದು ಸ್ತುತ್ಯಾರ್ಹ ಎಂದು ಶ್ಲಾಘಿಸಿದರು.

ಸೆ. 17ರಂದು ಹೈದರಾಬಾದ್‌ ಕರ್ನಾಟಕದ ವಿಮೋಚನಾ ದಿನವಷ್ಟೇ ಅಲ್ಲ; ಪ್ರಧಾನಿ ನರೇಂದ್ರ ಮೋದಿ ಜನ್ಮದಿನವೂ ಹೌದು. ಮುಂದಿನ ವರ್ಷ ಇದೇ ದಿನ ಸ್ಮಾರಕ ಹಾಗೂ ಪಟೇಲ್‌ ಅವರ ಪುತ್ಥಳಿಯನ್ನು ಮೋದಿ ಅನಾವರಣ ಮಾಡುವಂತೆ ಆಗಲಿ ಎಂದು ಆಶಿಸಿದರು.

ಇತಿಹಾಸ ಮೆಲುಕು ಹಾಕಿದ ಅವರು, ಹೈದರಾಬಾದ್ ಒಳಗೊಂಡು 350 ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸುವ ಮಹತ್ವದ ಕಾರ್ಯವನ್ನು ಸರ್ದಾರ ವಲ್ಲಭಭಾಯಿ ಪಟೇಲ್ ಮಾಡಿದ್ದಾರೆ. ಕಾಶ್ಮೀರ ವಿಷಯದಲ್ಲಿಯೂ ಜವಾಹರಲಾಲ್‌ ನೆಹರೂ ಬದಲಿಗೆ ಪಟೇಲ್‌ ಅವರೇ ತೀರ್ಮಾನ ಕೈಗೊಂಡಿದ್ದರೆ ಇಂದು ಆ ಸಮಸ್ಯೆಯೇ ಇರುತ್ತಿರಲಿಲ್ಲ ಎಂದರು.

‘ಗಾಂಧೀಜಿಯವರ ಅನುಯಾಯಿ ಆಗಿದ್ದ ಪಟೇಲ್‌ರು ದಿಟ್ಟ ನಿರ್ಧಾರ ಕೈಗೊಳ್ಳುವ ಮನಸ್ಥಿತಿ ಹೊಂದಿದ್ದರು. ನಿಷ್ಕಳಂಕ ರಾಜಕಾರಣಿಯೂ ಆಗಿದ್ದರು. ಅವರು ಮೃತಪಟ್ಟಾಗ ಅವರ ಖಾತೆಯಲ್ಲಿ ಕೇವಲ ₨ 150 ಇತ್ತು. ಕುಟುಂಬ ರಾಜಕಾರಣಕ್ಕೂ ಆಸ್ಪದ ಕೊಡಲಿಲ್ಲ. ನಿಜಾಮರ ಆಡಳಿತದ ಪರ ಇದ್ದ ರಜಾ­ಕಾರರ ವಿರುದ್ಧ ಹೋರಾಡಿ ಗೋರ್ಟಾ ಗ್ರಾಮದಲ್ಲಿ ಅನೇಕರು ಹುತಾತ್ಮ­ರಾದರು. ಈ ಭಾಗದಲ್ಲಿ ಕೋಮು ದಳ್ಳುರಿ ಭುಗಿಲೆದ್ದಿತ್ತು. ಪಟೇಲ್ ಅಂಥ ಪರಿಸ್ಥಿತಿಯನ್ನು ನಿಯಂತ್ರಿಸಿ ಈ ಭಾಗಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು’ ಎಂದರು.

ಕೇಂದ್ರ ಸಚಿವರಾದ ಡಿ.ವಿ.ಸದಾ­ನಂದಗೌಡ, ಅನಂತಕುಮಾರ್, ಜಿ.ಎಂ.ಸಿದ್ದೇಶ್ವರ, ಸಂಸದ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ಪ್ರತಿ­ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್‌ ಜೋಶಿ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅನುರಾಗ್‌ ಠಾಕೂರ್‌, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಮುನಿರಾಜುಗೌಡ, ಸಂಸದರಾದ ಭಗವಂತ ಖೂಬಾ, ಶೋಭಾ ಕರಂದ್ಲಾಜೆ ಇತರರು ಇದ್ದರು.

ಗೋರ್ಟಾ ಗ್ರಾಮದಲ್ಲಿ ಸ್ಮಾರಕ ನಿರ್ಮಾಣ ಮತ್ತು ಪುತ್ಥಳಿ ಸ್ಥಾಪನೆ ಕಾರ್ಯವನ್ನು ಬಿಜೆಪಿ ಯುವ ಮೋರ್ಚಾ ಕೈಗೆತ್ತಿಕೊಂಡಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳಿಸಿ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂ­ದಲೇ ಉದ್ಘಾಟಿಸುವ ಗುರಿಯನ್ನು ಹೊಂದಿದೆ.


source:http://www.prajavani.net/article/%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8-%E0%B2%A4%E0%B2%BF%E0%B2%B3%E0%B2%BF%E0%B2%B8%E0%B2%B2%E0%B3%81-%E0%B2%B8%E0%B3%8D%E0%B2%AE%E0%B2%BE%E0%B2%B0%E0%B2%95

ಬರಪೀಡಿತ ಜಿಲ್ಲೆ ಪ್ರಸ್ತಾವ: ಸಚಿವೆ ಉಮಾಶ್ರೀಜಿಲ್ಲೆಯ ಎಲ್ಲೆಡೆ ಸಂಭ್ರಮದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ  ಬರಪೀಡಿತ ಜಿಲ್ಲೆ ಪ್ರಸ್ತಾವ: ಸಚಿವೆ ಉಮಾಶ್ರೀ
ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ನಿಮಿತ್ತ ಬೀದರ್‌ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಗೌರವ ವಂದನೆ ಸ್ವೀಕರಿಸಿದರು

ಬೀದರ್: ‘ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ತಿಳಿಸಿದರು. ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ನಿಮಿತ್ತ ಬುಧವಾರ ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದರು.

ಜಿಲ್ಲೆಗೆ ಈ ಬಾರಿ ಮುಂಗಾರು ತಡವಾಗಿ ಪ್ರವೇಶಿಸಿದೆ. ಆಗಸ್ಟ್ ಎರಡನೇ ವಾರದವರೆಗೂ ಸತತ ಮೂರರಿಂದ 8 ವಾರಗಳ ಕಾಲ ಮಳೆ ಕೊರತೆ ಉಂಟಾಗಿದೆ. ಜೂನ್‌ ತಿಂಗಳು ಶೇ 57 ಮತ್ತು ಜುಲೈ ತಿಂಗಳಲ್ಲಿ ಶೇ 40 ರಷ್ಟು ಕಡಿಮೆ ಮಳೆಯಾಗಿದೆ ಎಂದು ಹೇಳಿದರು.
ಮಳೆ ಕೊರತೆ ಕಾರಣ ಉದ್ದು, ಹೆಸರು, ಸೋಯಾ ಅವರೆ, ತೊಗರಿ ಮತ್ತಿತರರ ಬೆಳೆಗಳು ನಷ್ಟವಾಗಿವೆ. ಆಗಸ್ಟ್‌ ತಿಂಗಳು ಬಸವಕಲ್ಯಾಣ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಅಂದರೆ 336.6 ಮಿ.ಮೀ. ಮಳೆ ಆಗಿದ್ದು, ಕೆರೆಕಟ್ಟೆಗಳು ಒಡೆದಿವೆ. ಪ್ರವಾಹ­ದಿಂದಾಗಿ 54 ಗ್ರಾಮಗಳಲ್ಲಿ 3,954 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟಕ್ಕೀಡಾಗಿದೆ. ಸುಮಾರು ₨ 21.04 ಕೋಟಿ ಬೆಳೆ ಹಾನಿ ಆಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.

ಕೇಂದ್ರ ಸರ್ಕಾರ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಅಡಿಯಲ್ಲಿ ಆರು ಜಿಲ್ಲೆಗಳನ್ನು ಆಯ್ಕೆ ಮಾಡಿದ್ದು, ಬೀದರ್ ಕೂಡ ಸೇರಿದೆ. ಯೋಜನೆಯಡಿ 2013–-14ನೇ ಸಾಲಿನಲ್ಲಿ ಜಿಲ್ಲೆಗೆ ₨ 22.75 ಕೋಟಿ ನಿಗದಿಪಡಿಸಲಾಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಕ್ರಿಯಾ ಯೋಜನೆಯಲ್ಲಿ ಜಿಲ್ಲೆಗೆ ₨ 15.26 ಕೋಟಿ ನಿಗದಿಪಡಿಸಿದ್ದು, ಈಗಾಗಲೇ ₨ 14.90 ಕೋಟಿ ಅನುದಾನ ಮಂಜೂರಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 371(ಜೆ) ಮೀಸಲಾತಿ ಪ್ರಮಾಣ ಪತ್ರ ಕೋರಿ 26,090 ಅರ್ಜಿ ಸಲ್ಲಿಕೆಯಾಗಿವೆ. ಇದರಲ್ಲಿ 26,013 ಜನರಿಗೆ ಪ್ರಮಾಣ ಪತ್ರ ವಿತರಿಸಲಾಗಿದೆ. ಜಿಲ್ಲಾಡಳಿತದಿಂದ 279 ಅಭ್ಯರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆಗಳ ಪೂರ್ವ­ಭಾವಿ ತರಬೇತಿ ಪರೀಕ್ಷೆ ನಡೆಸಲಾಗಿದ್ದು, 51 ಜನರಿಗೆ ವಸತಿ ಸಹಿತ ಉಚಿತ ತರಬೇತಿ ನೀಡಲಾಗಿದೆ. 432 ಗ್ರಾಮೀಣ, ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ ಸೇತುಬಂಧ ಕಾರ್ಯ­ಕ್ರಮ ನಡೆಸಲಾಗಿದೆ ಎಂದು ವಿವರಿಸಿದರು.

ಮಾಜಿ ಸಚಿವ ಭೀಮಣ್ಣ ಖಂಡ್ರೆ, ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ, ನಗರಸಭೆ ಅಧ್ಯಕ್ಷೆ ಫಾತಿಮಾ ಅನ್ವರ್ ಅಲಿ, ಉಪ ವಿಭಾಗಾಧಿಕಾರಿ ಆರತಿ ಆನಂದ, ಐಎಎಸ್‌ ಅಧಿಕಾರಿ ಡಾ.ಕೆ.ರಾಜೇಂದ್ರಕುಮಾರ ಇದ್ದರು.

ಭಾಲ್ಕಿ ವರದಿ

ಅಖಂಡ ಭಾರತದ ವಿಮೋಚನೆಗಾಗಿ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು. ಇಲ್ಲಿನ ಮಿನಿ ವಿಧಾನಸೌಧದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಹೈ.ಕ. ವಿಮೋಚನಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರ ಸ್ವಾತಂತ್ರ್ಯ ಪಡೆದರೂ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಸುಮಾರು 13 ತಿಂಗಳವರೆಗೆ ನಿಜಾಮನ ಅಡಳಿತದಲ್ಲೇ ಉಳಿದಿತ್ತು. ಇಲ್ಲಿನ ಜನರು ಸಾಕಷ್ಟು ನೋವು, ಕೌರ್ಯ ಅನುಭವಿಸುವಂತಾಗಿತ್ತು. ಅದರಿಂದ ಮುಕ್ತಗೊಳಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರು ಸದಾ ಸ್ಮರಣೀಯರು ಎಂದು ಖಂಡ್ರೆ ಹೇಳಿದರು.

ಸಾನಿಧ್ಯ ವಹಿಸಿದ್ದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಸಹಸ್ರಾರು ಜನರ ಹೋರಾಟದ ಫಲವಾಗಿ ದೊರಕಿರುವ ಸ್ವಾತಂತ್ರ್ಯದ ಮಹತ್ವವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದರು. ಉಪನ್ಯಾಸಕ ಅಶೋಕ ಮೈನಳ್ಳೆ ವಿಶೇಷ ಉಪನ್ಯಾಸ ಮಂಡಿಸಿದರು. ತಾ.ಪಂ ಅಧ್ಯಕ್ಷ ಶಿವಕುಮಾರ ಬಾಳೂರ, ಪುರಸಭೆ ಅಧ್ಯಕ್ಷ ವಿಶ್ವನಾಥ ಮೋರೆ, ಸ್ವಾತಂತ್ರ್ಯ ಹೋರಾಟ­ಗಾರರ ಸಂಘದ ಅಧ್ಯಕ್ಷ ರಾಮರಾವ ಕುಲಕರ್ಣಿ, ಎಪಿಎಂಸಿ ಅಧ್ಯಕ್ಷ ಅಶೋಕ ಪಾಟೀಲ ಮುಂತಾದವರು ಇದ್ದರು. ತಹಸೀಲ್ದಾರ ರಮೇಶ ಪೆದ್ದೆ ಸ್ವಾಗತಿಸಿದರು. ಗಣಪತರಾವ ಕಲ್ಲೂರೆ ವಂದಿಸಿದರು.Source:http://www.prajavani.net/article/%E0%B2%AC%E0%B2%B0%E0%B2%AA%E0%B3%80%E0%B2%A1%E0%B2%BF%E0%B2%A4-%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%86-%E0%B2%AA%E0%B3%8D%E0%B2%B0%E0%B2%B8%E0%B3%8D%E0%B2%A4%E0%B2%BE%E0%B2%B5-%E0%B2%B8%E0%B2%9A%E0%B2%BF%E0%B2%B5%E0%B3%86-%E0%B2%89%E0%B2%AE%E0%B2%BE%E0%B2%B6%E0%B3%8D%E0%B2%B0%E0%B3%80